ಜನರ ಮೇಲೆ ಕಾಳಜಿ ಇಲ್ಲದೆ ಇರುವ ಪಕ್ಷ ಇಂದು ರಾಜ್ಯ, ದೇಶವನ್ನು ಆಳುತ್ತಿರುವುದು ನಮ್ಮ ದುರ್ದೈವ : ಅನಿಲ್.

106
firstsuddi

ಕಳಸ : ಜನರ ಮೇಲೆಕಾಳಜಿ ಇಲ್ಲದೆ ಇರುವ ಪಕ್ಷ ಇಂದು ರಾಜ್ಯ,ದೇಶವನ್ನು ಆಳುತ್ತಿರುವುದು ನಮ್ಮ ದುರ್ದೈವವಾಗಿದೆ ಎಂದು ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅನಿಲ್ ಹೇಳಿದರು.

ಕಳಸದಲ್ಲಿ ಇಂದು ನಡೆದ ಕಳಸ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಜನರಿಗೆ ಸುಳ್ಳು ಕಂತೆಗಳ ಭರವಸೆಯನ್ನು ನೀಡಿ ಆಡಳಿತ ಪಡೆದ ಬಿಜೆಪಿ ಇಂದು ಜನರಿಗೆ ಹೇಳಿದ ಮಾತಿಗೆ ತಪ್ಪಿ ಇಡೀ ದೇಶವನ್ನು ಬಡತನದ ಕೂಪಕ್ಕೆ ತಲ್ಲುತ್ತಿದೆ.ಈ ಬಾಗದ ಶಾಸಕರಿಗೆ ಅವರದ್ದೆ ಸರ್ಕಾರ ಇದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗದೆ ತನ್ನ ಸರ್ಕಾರದ ವಿರುದ್ಧ ಧರಣಿ ಕೂರುವಂತ ಪರಿಸ್ಥಿತಿ ಬಂದಿದೆ ಎಂದಾದರೆ ಆಡಳಿತ ವ್ಯವಸ್ಥೆ ಹೇಗಿದೆ ಅನ್ನುವುದನ್ನು ಜನ ತಿಳಿದುಕೊಳ್ಳಬೇಕು.ಇಂತಹ ಸತ್ಯ ವಿಚಾರಗಳನ್ನು ಬಿಜೆಪಿಯ ಪೊಳ್ಳು ಭರವಸೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಕೆಲಸವಾಗಬೇಕು.
ಅಧಿಕಾರ ಕೇವಲ ಕುರ್ಚಿಗೆ,ವೇದಿಕೆಗೆ ಸೀಮಿತವಾಗಿರದೆ ಜನರ ಜೊತೆ ಬೆರೆತು ಕೆಲಸ ಮಾಡುವಂತಿರಬೇಕು ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ಮಾತನಾಡಿ ಈಗಿನ ಸರ್ಕಾರ ಇಡೀ ದೇಶದ ಆಸ್ತಿಯನ್ನು ಖಾಸಗೀಕರಣ ಮಾಡಲು ಹೊರಟಿದೆ.ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ದೇಶದ ಭದ್ರತೆಗೆ ತೊಡಕಾಗುತ್ತದೆ. ದೇಶದ ಆಡಳಿತ ವ್ಯವಸ್ಥೆ ಕೊರೊನಾವನ್ನು ನಿಯಂತ್ರಿಸಲು ವಿಫಲವಾಗಿದೆ. ಜನರ ಜೀವವನ್ನು ರಕ್ಷಣೆ ಮಾಡಲು ಸಾದ್ಯವಾಗಿಲ್ಲ.ಸಾಕಷ್ಟು ರೈತರ ಭೂಮಿ ಅರಣ್ಯ ಇಲಾಖೆಯ ಪಾಲಾಗುತ್ತಿದ್ದರೂ ಕೂಡ ಈ ಭಾಗದ ಸಂಸದೆ ದ್ವನಿ ಎತ್ತುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಅಧ್ಯಕ್ಷ ಕೆ.ಸಿ.ಮಹೇಶ್ ಎಡದಾಳು ಇವರಿಗೆ ವೀರೇಂದ್ರ ಜೈನ್ ತನ್ನ ಅಧಿಕಾರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್,ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್,ಸುಭಾನ್,ಕೌಶಿಕ್,ಸಾಮಾಜಿಕ ಜಾಲಾತಾಣದ ಜಿಲ್ಲಾ ಅಧ್ಯಕ್ಷ ಸಂಸುದ್ಧೀನ್, ಕಳಸ ಸಾಮಾಜಿಕ ಜಾಲಾತಾಣದ ಅಧ್ಯಕ್ಷ ರಜಿತ್ ಕೆಳಗೂರು,ಮುಖಂಡರಾದ ಎನ್.ಎಂ.ಹರ್ಷ,ವಿಶ್ವನಾಥ ಇದ್ದರು.