ಜಮ್ಮು ಕಾಶ್ಮೀರಾದ ನೌಗಮ್ ಸೆಕ್ಟರ್ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಯೋಧರು…

192
firstsuddi

ಶ್ರೀನಗರ : ಜಮ್ಮು ಕಾಶ್ಮೀರಾದ ನೌಗಮ್ ಸೆಕ್ಟರ್ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಕುಪ್ವಾರ ಜಿಲ್ಲೆಯ ನೌಗಮ್ ಸೆಕ್ಟರ್‍ನಲ್ಲಿ ಉಗ್ರರು ಇಂದು ಮುಂಜಾನೆ ಒಳನುಸುಳಲು ಪ್ರಯತ್ನಿಸುತ್ತಿದ್ದನ್ನು ಗಮನಿಸಿದ ಯೋಧರು ಕೂಡಲೇ ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿದ್ದು, ಉಗ್ರರ ಬಳಿ ಇದ್ದ ಎರಡು ಎಕೆ-47 ರೈಫಲ್‍ಗಳು, ಮದ್ದು ಗುಂಡುಗಳು ಸೇರಿದಂತೆ ಅಪಾರ ಪ್ರಮಾನದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.