ಜಯಚಾಮರಾಜ ಒಡೆಯರ್ ಪ್ರತಿಮೆ ಖಡ್ಗಕ್ಕೆ ಹಾನಿ!

79
firstsuddi

ಮೈಸೂರು : ಅರಮನೆ ಮುಂಭಾಗವಿರುವ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗಕ್ಕೆ ಹಾನಿಯಾಗಿದೆ.

ನಿನ್ನೆ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಜಂಬೂಸವಾರಿ ವೀಕ್ಷಿಸಲು ಪ್ರತಿಮೆ ಬಳಿ ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ನೂಕಾಟ-ತಳ್ಳಾಟದಿಂದ ಪ್ರತಿಮೆಯ ಖಡ್ಗ ಮುರಿದು ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಪ್ರತಿಮೆ ಬಳಿ ಹೂ ಕುಂಡಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.