ಬೆಂಗಳೂರು : ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರನ್ನು ಉಚ್ಚಾಟಿಸಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಹಿರಿಯ ಮುತ್ಸದ್ಧಿ, ದಿವಂಗತ ಜಿ. ಮಾದೇಗೌಡರ ವಿರುದ್ಧ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದರು.
ಶಿವರಾಮೇಗೌಡ ತಿದ್ದಿಕೊಳ್ಳುತ್ತಾರೆ ಎಂದು ಸುಮ್ಮನಿದ್ದೆ. ಪದೇ-ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇದೆ. ಅವರಿಲ್ಲದ ಸಮಯದಲ್ಲಿ ಇಂಥಹ ಪದ ಬಳಕೆಯನ್ನು ಮಾಡುವುದು ಸರಿಯಲ್ಲ. ಮಾದೇಗೌಡರಂತಹ ಒಬ್ಬ ಹಿರಿಯ ನಾಯಕರ ಬಗ್ಗೆ ಅಷ್ಟು ಲಗುವಾಗಿ ಮಾತನಾಡಿದ್ದು, ಮತ್ತು ಅವರ ಬಗ್ಗೆ ಪದ ಬಳಕೆಯನ್ನು ಮಾಡಿದವರನ್ನು ನಮ್ಮ ಪಕ್ಷದಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಶಿವರಾಮೇಗೌಡರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕುವಂತೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ ಎಂದಿದ್ದರು. ಇದರ ಬೆನ್ನಲ್ಲೇ ಶಿವರಾಮೇಗೌಡರನ್ನು ಜೆಡಿಎಸ್ನಿಂದ ಉಚ್ಚಾಟನೆ ಮಾಡಲಾಗಿದೆ.










