ಟೈರ್ ಸ್ಫೋಟಗೊಂಡು ಪಿಲ್ಲರ್​​ಗೆ ಟಿಪ್ಪರ್ ಡಿಕ್ಕಿ – ಚಾಲಕ ಸಜೀವ ದಹನ…

74
firstsuddi

ಮಂಡ್ಯ : ಟಿಪ್ಪರ್ ನ ಟೈರ್ ಸ್ಫೋಟಗೊಂಡು ಪಿಲ್ಲರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಮದ್ದೂರಿನ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಹಾಸನ ಮೂಲದ ದಿನೇಶ್ ಮೃತ ಚಾಲಕ.

ರಾಮನಗರದ ಬಿಡದಿಯಿಂದ ಮೈಸೂರಿಗೆ ಜಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಟೈರ್ ಸ್ಫೋಟಗೊಂಡು ಮೇಲ್ಸೇತುವೆ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಹೊರಬರಲಾಗದೇ ವಾಹನದಲ್ಲೇ ಸಜೀವ ದಹನವಾಗಿದ್ದಾನೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ಮುಂಭಾಗ ನಜ್ಜುಗುಜ್ಜಾಗಿದೆ.

ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.