ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ದೇಶದ ನಿರುದ್ಯೋಗಿಗಳ ಮಾಹಿತಿ ಸಂಗ್ರಹಕ್ಕೆ ಒಂದು ಹೊಸ ಅಭಿಯಾನವನ್ನು ಆರಭಿಸಿದ್ದು, ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಲು ಮುಂದಾಗಿದ್ದಾರೆ. ಈಗಾಗಲೆ ಬಿಜೆಪಿ ಸರ್ಕಾರ ಸಿಎಎ ಹಾಗೂ ಎನ್ಆರ್ಸಿ ಬೆಂಬಲಿಸಿ ಮಿಸ್ಡ್ ಕಾಲ್ ಮಾಡುವಂತೆ ಅಭಿಯಾನವನ್ನು ಆರಂಭಿಸಿತ್ತು. ಈಗಾ ಕಾಂಗ್ರೆಸ್ ದೇಶದ ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದು, ನಿರುದ್ಯೋಗಿಗಳಿಗೆ 8151994411 ನಂಬರ್ ಗೆ ಮಿಸ್ಡ್ ಕಾಲ್ ಮಾಡುವಂತೆ ಕರೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ನಲ್ಲಿ “ನರೇಂದ್ರ ಮೋದಿ ಯವರ ಅನರ್ಥ ಆರ್ಥಿಕತೆ ಮತ್ತು ದೂರದೃಷ್ಟಿಯಿಲ್ಲದ ಆಡಳಿತಾತ್ಮಕ ಕ್ರಮಗಳಿಂದ ದೇಶದ ಯುವಕರು ಕಂಗಾಲಾಗಿದ್ದು ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಬನ್ನಿ ಬಿಜೆಪಿ ಸುಳ್ಳುಗಳ ವಿರುದ್ಧ ದನಿಯೆತ್ತೋಣ 8151994411 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೊಣ” ಎಂದು ಟ್ವೀಟ್ ಮಾಡಿದ್ದಾರೆ.











