ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿಯ ಕೆಎಲ್ಎಲ್ಎಡಿಎಸ್ ಶಾಖೆಯ ಉಸ್ತುವಾರಿ ನಿರ್ವಹಿಸುತ್ತಿದ್ದ ಗಿರಿರಾಜ್ ಎಂಬುವರು ಡೆತ್ ನೋಟ್ ಬರೆದು ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ.
ಗಿರಿರಾಜ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರ ಅನುದಾನ ಹಂಚಿಕೆಯ ಕೆಲಸ ಮಾಡುತ್ತಿದ್ದರು. ಇಲ್ಲಿ ಅನುದಾನ ಸರಿಯಾಗಿ ಬಾರದ ಕಾರಣ ಹಣ ಬಿಡುಗಡೆಗೆ ನನ್ನ ಬಳಿ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂದು ತಮ್ಮ ಕಚೇರಿಯ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಡೆತ್ ನೋಟ್ ಸೆಂಡ್ ಮಾಡಿ ಕಾಣೆಯಾಗಿದ್ದಾರೆ. ಗಿರಿರಾಜ್ ಮಿಸ್ಸಿಂಗ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೇಲಾಧಿಕಾರಿಗಳು ನಮ್ಮಂತಹ ಕೆಳ ಹಂತದವರ ಮೇಲೆ ದಬ್ಬಾಳಿಕೆ ನಡೆಸಿ, ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳು ಸಂಜೆ ಮನೆಗೆ ಹೋಗುತ್ತಾರೆ. ಆದರೆ, ನಮಗೆ ರಾತ್ರಿ ಪೂರ್ತಿ ಕೆಲಸ ಮಾಡಿ ಎನ್ನುತ್ತಾರೆ. ನನ್ನ ಸಾವಿಗೆ ಐಎಎಸ್ ಹಿರಿಯ ಅಧಿಕಾರಿ ಕಾರಣ ಎಂದು ಗಿರೀಶ್ ಡೆತ್ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.










