ಮುಂಬೈ : ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್ ನ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿಯ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈನ ಉದ್ಯಮಿಯೊಬ್ಬರ ಪುತ್ರನಾದ ಇಮ್ತಿಯಾಜ್ ಖತ್ರಿಗೆ ಬಾಲಿವುಡ್ ನ ಹಲವು ಮಂದಿ ಜೊತೆ ಸಂಪರ್ಕ ಇದೆ. ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸಿದ್ದಾರೆ ಎಂದು ಆರೋಪಿಸಲಾಗಿತ್ತು ಎನ್ನಲಾಗಿದೆ.
ಇನ್ನೂ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಿನ್ನೆ ಮುಂಬೈನ ನ್ಯಾಯಾಲಯದಲ್ಲಿ ನಡೆದಿದ್ದು, ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್ ಗೆ ಜಾಮೀನು ನೀಡಿಲ್ಲ. ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್ ಗೆ ಎನ್‍ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.










