ತಂದೆಯಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೆ : ಖುಷ್ಬೂ ಸುಂದರ್

61
firstsuddi

ನಟಿ ಕಮ್ ರಾಜಕಾರಣಿಯಾಗಿರುವ ಖುಷ್ಬೂ ಸುಂದರ್ ಅವರು ತಂದೆಯಿಂದಲೇ ಲೈಂಗಿಕ ಕಿರುಕುಳ ಅನುಭವಿಸಿರುವ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ಅದು ಹುಡುಗಿ ಆಗಿರಬಹುದು, ಹುಡುಗನೇ ಆಗಿರಬಹುದು. ನನ್ನ ತಾಯಿಯ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಹೊಡೆಯುವುದು ಅಪರಾಧ ಆದರೆ ಆ ವ್ಯಕ್ತಿ, ತಮ್ಮ ಜನ್ಮ ಹಕ್ಕು ಎನ್ನುವ ರೀತಿ ವರ್ತಿಸುತ್ತಿದ್ದ. ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು. 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ ಎಂದಿದ್ದಾರೆ ಖುಷ್ಬೂ.

ನಾನು ಇದನ್ನು ಹೇಳಿದರೆ ಕುಟುಂಬದ ಇತರ ಸದಸ್ಯರು ನಿಂದನೆಗೆ ಒಳಗಾಗುತ್ತಾರೆ ಎಂಬ ಭಯವು ನನ್ನ ಬಾಯಿಯನ್ನು ಹಲವು ವರ್ಷಗಳವರೆಗೆ ಮುಚ್ಚಿಸಿತು. ನನ್ನ ತಾಯಿ ನನ್ನನ್ನು ನಂಬದಿರಬಹುದು ಎಂದು ಅನಿಸುತ್ತಿತ್ತು. ಏಕೆಂದರೆ ಏನೇ ಆದರೂ ತನ್ನ ಗಂಡ ದೇವರು ಎನ್ನುವ ಮನಸ್ಥಿತಿ ಅವರದ್ದು. 15ನೇ ವಯಸ್ಸಿಗೆ ನಾನು ತಿರುಗಿಬಿದ್ದೆ ಎಂದು ಖುಷ್ಬೂ ಹೇಳಿದ್ದಾರೆ.

ಖುಷ್ಬೂ ಅವರು ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಪಡೆದರು.