ತಂದೆಯ ಅಸ್ತಿಯನ್ನು ಬಿಡಲು ತೆರಳಿದ್ದ ಮಗ ನದಿಯಲ್ಲಿ ಮುಳುಗಿ ಸಾವು…

170
firstsuddi

ಬಾಗಲಕೋಟೆ : ನದಿಯಲ್ಲಿ ತಂದೆಯಸ್ತಿಯನ್ನು ಬಿಡಲು ತೆರಳಿದ್ದ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚೋಳಚಗುಡ್ಡ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿ ಮಹಾಂತೇಶ್ ಬಿ ಯಾದವ್(45) ಮೃತ ದುರ್ಧೈವಿ ಎಂದು ಗುರುತಿಸಲಾಗಿದೆ. ಮೃತ ಮಹಾಂತೇಶ್ ಅವರು ತಮ್ಮ ತಂದೆ ಭೀಮಣ್ಣ ಯಾಧವ್ ಅವರ ಹನ್ನೊಂದನೇ ದಿನದ ಕಾರ್ಯವಿದ್ದ ಹಿನ್ನೆಲೆ, ತಂದೆಯ ಅಸ್ತಿಯನ್ನು ನದಿಯಲ್ಲಿ ಬಿಡಲು ತಮ್ಮ ಸಹೋದದರೊಂದಿಗೆ ಬಂದಿದ್ದರು. ಇದರಿಂದಾಗಿ ಅಸ್ತಿಯನ್ನು ಬಿಡಲು ಮಲಪ್ರಭಾ ನದಿಗೆ ಇಳಿದಿದ್ದು, ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.