ತಂದೆ ಜೊತೆ ಕಾಲೇಜಿಗೆ ಹೋಗುತ್ತಿದ್ದ ಮಗ ಅಪಘಾತದಲ್ಲಿ ಸಾವು…

109
firstsuddi

ಬೆಂಗಳೂರು ಗ್ರಾಮಾಂತರ : ಕಾಲೇಜಿಗೆ ಹೋಗುತ್ತಿದ್ದ ತಂದೆ ಮಗನ ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚುಂಚೇಗೌಡನ ಹೊಸಹಳ್ಳಿ ಬಳಿ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಅಂಬಲಗೆರೆ ನಿವಾಸಿ ವರುಣ್ ( 18 ) ಮೃತ ವಿದ್ಯಾರ್ಥಿ. ಇಂದು ಬೆಳಗ್ಗೆ ವರುಣ್ ಕಾಲೇಜಿಗೆ ತಂದೆ ಸಿದ್ದಗಂಗಪ್ಪ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಬಸ್ ಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ವರುಣ್ ಮೇಲೆ ಕ್ಯಾಂಟರ್ ಹರಿದಿದೆ. ಪರಿಣಾಮ ವರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತಂದೆ ಸಿದ್ದಗಂಗಪ್ಪ ಸಣ್ಣ, ಪುಟ್ಡ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ದೊಡ್ಡಬಳ್ಳಾಪುರ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಕ್ಯಾಂಟರ್ ಸಮೇತ ಚಾಲಕ ಎಸ್ಕೇಪ್ ಗೆ ಯತ್ನಿಸಿದ್ದು, ಕ್ಯಾಂಟರ್ ಚೇಸ್ ಮಾಡಿ ಚಾಲಕನನ್ನ ದೊಡ್ಡಬೆಳವಂಗಲ ಪಿಎಸ್ಐ ಜ್ಞಾನಮೂರ್ತಿ ಬಂದಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.