ರಷ್ಯಾ-ಉಕ್ರೇನ್ ಸಂಘರ್ಷ : ಚೀನಾ ಸೇನೆಯ ಸಹಕಾರ ಕೋರಿದ ರಷ್ಯಾ.

72
firstsuddi

ವಾಷಿಂಗ್ಟನ್ : ಉಕ್ರೇನ್ ಮೇಲೆ ಆಕ್ರಮಣ ಮುಂದುವರೆಸಿರುವ ರಷ್ಯಾ, ತನ್ನ ಯುದ್ಧವನ್ನು ಮುಂದುವರಿಸಲು ಚೀನಾ ಸೇನೆಯ ಸಹಕಾರವನ್ನು ಕೋರಿದೆ ಎಂದು ಅಮೆರಿಕ ಆಧಿಕಾರಿಗಳೊಬ್ಬರು ತಿಳಿಸಿದ್ದಾರೆ.

ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಷಿಂಗ್ಟನ್ ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ರಷ್ಯಾಕ್ಕೆ ಸಹಾಯ ಮಾಡಲು ಚೀನಾ ಸಿದ್ಧವಾಗಿರುವ ಬಗ್ಗೆ ಯಾವುದೇ ಮಾಹಿತಿಗಳು ತನಗೆ ತಿಳಿದಿಲ್ಲ ಎಂದಿದ್ದಾರೆ.

ಒಂದು ವೇಳೆ ರಷ್ಯಾ ಮನವಿಗೆ ಸ್ಪಂದಿಸಿ ಚೀನಾ ಸೇನಾ ಸಹಕಾರ ನೀಡಿದಲ್ಲಿ ಚೀನಾಗೆ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಸಿದೆ. ಅಲ್ಲದೇ ಚೀನಾ ರಷ್ಯಾಗೆ ನೆರವು ನೀಡಲು ನಾವು ಬಿಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.