ಬೆಂಗಳೂರು : ನಟಿ ಮೇಘನಾ ರಾಜ್ ಹಾಗೂ ಅವರ ಪುತ್ರನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎರಡು ದಿನಗಳ ಹಿಂದೆ ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ನಟ ಸುಂದರ್ ರಾಜ್, ಮೇಘನಾ ರಾಜ್ ಹಾಗೂ ಮಗುವಿನ ವರದಿ ನೆಗೆಟಿವ್ ಬಂದಿತ್ತು. ಬಳಿಕ ಸುಂದರ್ ರಾಜ್ ಅವರಿಗೂ ಪಾಸಿಟಿವ್ ಬಂದಿತ್ತು. ಇದೀಗಾ ನಟಿ ಮೇಘನಾ ರಾಜ್ ಹಾಗೂ ಪುಟ್ಟ ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ತಾಯಿ-ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾರ ಸಂಪರ್ಕದಲ್ಲಿ ಇಲ್ಲದಿದ್ದರೂ ಹೇಗೆ ಸೋಂಕು ತಗುಲಿತು ಎಂದು ತಿಳಿದಿಲ್ಲ. ನಮ್ಮ ಸಂಪರ್ಕಕ್ಕೆ ಬಂದವರು ಎಚ್ಚರ ವಹಿಸಿ ಎಂದು ಸುಂದರ್ ರಾಜ್ ಅವರು ಮನವಿ ಮಾಡಿಕೊಂಡಿದ್ದಾರೆ.










