ತಾಜ್‍ಮಹಲ್‍ನ 22 ಕೊಠಡಿಗಳನ್ನು ತೆರೆಯುವಂತೆ ಅರ್ಜಿ ಸಲ್ಲಿಕೆ ; ಇಂದು ಯುಪಿ ಹೈಕೋರ್ಟ್‍ನಿಂದ ವಿಚಾರಣೆ…

60
firstsuddi

ಲಕ್ನೋ : ಪ್ರೇಮಸೌಧವೆಂದೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ತಾಜ್ ಮಹಲ್ ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಇಂದು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಅಯೋಧ್ಯೆಯ ಬಿಜೆಪಿ ಮುಖಂಡ ಡಾ.ರಜನೀಶ್ ಸಿಂಗ್ ಅವರು ತಾಜ್ ಮಹಲ್ ಗೆ ಸಂಬಂಧಿಸಿದಂತೆ ಯುಪಿಯ ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುದೀರ್ಘ ಕಾಲದಿಂದ ಮುಚ್ಚಿರುವ ತಾಜ್ ಮಹಲ್ ನ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ಕೆಲವು ಹಿಂದೂ ಗುಂಪುಗಳು ಮತ್ತು ಪ್ರತಿಷ್ಠಿತ ಸಂತರು ಈ ಸ್ಮಾರಕವನ್ನು ಹಳೆಯ ಶಿವ ದೇವಾಲಯವೆಂದು ಹೇಳುತ್ತಿದ್ದಾರೆ. ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಎಂದು ಅನೇಕ ಇತಿಹಾಸಕಾರರು ನಂಬುತ್ತಾರೆ. ಮತ್ತೆ ಕೆಲವರು ತೇಜೋ ಮಹಾಲಯ ಅಥವಾ ತಾಜ್ ಮಹಲ್ ಎಂದು ನಂಬುತ್ತಾರೆ. ಬಾಗಿಲುಗಳನ್ನು ತೆರೆದು, ಸಮೀಕ್ಷೆ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.