ತಿರುಪತಿಗೆಂದು ಕರೆದೊಯ್ದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು, 75 ಸಾವಿರ ರೂ.ದಂಡ…

77
firstsuddi

ಚಾಮರಾಜನಗರ : ಅಪ್ರಾಪ್ತ ಬಾಲಕಿಯನ್ನು ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ 5 ವರ್ಷ ಸಜೆ ವಿಧಿಸಲು ಆದೇಶಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣ ನಿವಾಸಿ ಕುಮಾರ್ ಅಲಿಯಾಸ್ ಧ್ರುವ(19) ಶಿಕ್ಷೆಗೊಳಗಾದ ಯುವಕ. 17 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಪೀಡಿಸಿ ಕೊನೆಗೇ ದೇಗುಲಕ್ಕೆ ಹೋಗೋಣವೆಂದು 2019 ಫೆ.24 ರಂದು ತಿರುಮಲ ತಿರುಪತಿಗೆ ಕರೆದೊಯ್ದಿದ್ದಾನೆ. ದೇವಾಲಯದಿಂದ ಹಿಂದಿರುಗಿ ರೈಲಿನಲ್ಲಿ ಮೈಸೂರಿಗೆ ಬರುವಾಗ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಲೈಂಗಿಕ ಕ್ರಿಯೆಗೆ ಪೀಡಿಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವಕನಿಗೆ 5 ವರ್ಷ ಸಾದಾ ಸಜೆ 75 ಸಾವಿರ ರೂ. ದಂಡ ವಿಧಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆ ತಾಯಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.