ತುಮಕೂರು : ತೆಂಗಿನ ಕಾಯಿ ಕದ್ದಿದ್ದಕ್ಕೆ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಮನಸೋ ಇಚ್ಚೆ ಥಳಿಸಿರೋ ಘಟನೆ ತುರುವೇಕೆರೆ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ.
ಹರೀಶ್ ತೆಂಗಿನಕಾಯಿ ಕದ್ದ ಕಳ್ಳ. ಈತ ತೋಟದಲ್ಲಿ ತೆಂಗಿನಕಾಯಿ ಕಳವು ಮಾಡಿದ್ದಾನೆ ಎಂಬ ಕಾರಣಕ್ಕೆ ತೋಟದ ಮಾಲೀಕ ರಾಜು ಎಂಬಾತ ಕಂಬಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಹೊಡೆದಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾನವೀಯತೆ ಮರೆತು ನಡೆದುಕೊಂಡಿರುವ ರಾಜು ಎಂಬಾತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










