ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ ; ಒಂದೂವರೆ ತಿಂಗಳ ಅಂತರದಲ್ಲಿ ತಂದೆ-ತಾಯಿ ಕಳೆದುಕೊಂಡ ಮಹೇಶ್ ಬಾಬು.

82
firstsuddi

ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರ ತಂದೆ ‘ಸೂಪರ್ ಸ್ಟಾರ್’ ಕೃಷ್ಣ(80)ಅವರು ನಿಧನರಾಗಿದ್ದಾರೆ.

ಕೃಷ್ಣ ಅವರನ್ನು ಭಾನುವಾರ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೇ ಅಲ್ಲದೇ ಅವರಿಗೆ ಹೃದಯಾಘಾತವಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಹೇಶ್ ಬಾಬು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ತಾಯಿ ಇಂದಿರಾ ದೇವಿಯನ್ನು ಮಹೇಶ್ ಬಾಬು ಕಳೆದುಕೊಂಡಿದ್ದರು. ಆ ದುಃಖದಲ್ಲೇ ಇನ್ನೂ ಇರುವಾಗ ಇದೀಗ ತಂದೆ ಕೃಷ್ಣ ಅವರನ್ನೂ ಕಳೆದುಕೊಂಡಿದ್ದಾರೆ.