ಮುಂಬೈ : ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಅವರನ್ನು ನೀಲಿ ಚಿತ್ರಗಳನ್ನು ಚಿತ್ರಿಸಿ ನಿರ್ಮಾಣ ಮಾಡುವ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಇಂದು ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳಿಗೆ ನೊಂದು ಇನ್ ಸ್ಟಾಗ್ರಾಮ್ ನಲ್ಲಿ ನಟಿ ಪೋಸ್ಟ್ ಮಾಡಿದ್ದಾರೆ.
ಹೌದು, ಹಲವು ದಿನಗಳಿಂದ ನಾನು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇನೆ. ನನ್ನ ಮೇಲೆ ಬರುತ್ತಿರುವ ವದಂತಿಗಳು, ಮಾಧ್ಯಮದಲ್ಲಿ ನಮ್ಮ ಮೇಲೆ ವಿನಾಕಾರಣ ಮಾಡುತ್ತಿರುವ ಆರೋಪಗಳನ್ನು ಗಮನಿಸಿದ್ದೇನೆ. ನನ್ನನ್ನು ಸೇರಿ ನಮ್ಮ ಇಡೀ ಕುಟುಂಬವನ್ನು ಟ್ರೋಲ್ ಮಾಡಿರುವ ಪೋಸ್ಟ್ ಗಳನ್ನು ನೋಡಿದ್ದೇನೆ. ಈ ಪ್ರಕರಣ ಪೂರ್ವಾಗ್ರಹವಾಗಿದ್ದು ನಾನು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ದಯವಿಟ್ಟು ನನ್ನ ವಿರುದ್ಧ ಆರೋಪಿಸುವುದನ್ನು ನಿಲ್ಲಿಸಿ. ಈ ಪ್ರಕರಣದಲ್ಲಿ ನಮಗೆ ಲಭ್ಯವಿರುವ ಕಾನೂನುಗಳನ್ನು ಆಶ್ರಯಿಸಿದ್ದೇವೆ. ನಿಮ್ಮಲ್ಲಿ ನಾನು ತಾಯಿಯಾಗಿ ಕೇಳಿಕೊಳ್ಳುವುದೆಂದರೆ, ದಯವಿಟ್ಟು ಪೂರ್ತಿ ವಿಷಯ ತಿಳಿಯದೆ ಏನನ್ನು ಮಾತನಾಡಬೇಡಿ. ನನ್ನ ಮಕ್ಕಳ ಸಲುವಾಗಿ ನಮ್ಮ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡಿ.
ಭಾರತೀಯ ಕಾನೂನು ಪಾಲಿಸುವವಳು ನಾನು. ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದು, ಆ ನಂಬಿಕೆಯನ್ನು ಎಂದಿಗೂ ಹುಸಿ ಮಾಡುವುದಿಲ್ಲ. ದಯವಿಟ್ಟು ನಮ್ಮ ಕುಟುಂಬದ ಗೌಪ್ಯತೆ ಕಾಪಾಡಿ. ನಮಗೆ ಮಾಧ್ಯಮ ವಿಚಾರಣೆ ಬೇಕಿಲ್ಲ. ಕಾನೂನಿನ ಹಾದಿಯಲ್ಲಿ ನಾವು ಹೋರಾಟ ಮುಂದುವರಿಸುತ್ತೇವೆ. ಸತ್ಯಮೇವ ಜಯತೇ’. ಎಂದು ಮನವಿ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.
My statement. pic.twitter.com/AAHb2STNNh
— SHILPA SHETTY KUNDRA (@TheShilpaShetty) August 2, 2021










