ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಜ್ರಕಾಯ’ ಬೆಡಗಿ ಶುಭ್ರಾ ಅಯ್ಯಪ್ಪ.

62
firstsuddi

ಶಿವರಾಜ್ ಕುಮಾರ್ ನಟಿಸಿರುವ ವಜ್ರಕಾಯ ಚಿತ್ರದ ನಟಿ ಶುಭ್ರಾ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ಸಪ್ತಪದಿ ತುಳಿದಿದ್ದಾರೆ.

ಉದ್ಯಮಿ ವಿಶಾಲ್ ಮತ್ತು ಶುಭ್ರಾ ಮದುವೆ ಜನವರಿ 18ರಂದು ಕೂರ್ಗ್‌ನ `ದೊಡ್ಮನೆ’ ಎಂಬ 150 ವರ್ಷದ ಹಳೆಯ ಮನೆಯಲ್ಲಿ ಮದುವೆಯಾಗಿದ್ದಾರೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗವಹಿಸಿದ್ದರು. ಇನ್ನೂ ಜ.20 ಮತ್ತು 21ರಂದು ಸಿನಿಮಾ ರಂಗದ ಸ್ನೇಹಿತರಿಗೆ, ಆಪ್ತರಿಗೆ ಮೈಸೂರಿನಲ್ಲಿ ಆರತಕ್ಷತೆ ಇರಲಿದೆ.

ಕಳೆದ ವರ್ಷ ನಟಿ ಶುಭ್ರಾ ಅಯ್ಯಪ್ಪ ಅವರು ಮದುವೆ ಆಗುವ ಹುಡುಗನ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದರು. ಸ್ಯಾಂಡಲ್ ವುಡ್ ನಟಿ ಶುಭ್ರಾ ಅಯ್ಯಪ್ಪ ಅಷ್ಟೊಂದು ಸಿನಿಮಾಗಳನ್ನು ಮಾಡಿಲ್ಲ. ಆದ್ರೆ ವ್ರಜಕಾಯದಿಂದ ಕನ್ನಡಿಗರಿಗೆ ಪರಿಚಿತ. ಅಭಿಮಾನಿಗಳು ನವಜೋಡಿಗೆ ಶುಭಹಾರೈಸಿದ್ದಾರೆ.