ದೈವನರ್ತನದ ವೇಳೆಯೇ ಕುಸಿದು ಬಿದ್ದು ನರ್ತಕ ಸಾವು…

69
firstsuddi

ಮಂಗಳೂರು : ದೈವನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.

ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು ಅಜಿಲ (59) ಸಾವನ್ನಪ್ಪಿದ ದೈವ ನರ್ತಕ. ನಿನ್ನೆ ರಾತ್ರಿ ಎಡಮಂಗಲ ಗ್ರಾಮದ ಇಡ್ಯಟ್ಕ ಎಂಬಲ್ಲಿ ಎರಡು ದೈವಗಳ ನರ್ತನ ಸೇವೆ ಏಕಕಾಲದಲ್ಲಿ ನಡೆಯುತ್ತಿತ್ತು.

ಶಿರಾಡಿ ದೈವದ ನರ್ತನಕ್ಕೆ ಮೊದಲು ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಬಳಿಕ ಶಿರಾಡಿ ದೈವದ ಕೋಲ ನಡೆಯುತ್ತಿದ್ದ ಸಮಯದಲ್ಲಿ ಕಾಂತು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದೈವ ನರ್ತನದ ಸನ್ನಿವೇಶ ಮತ್ತು ನರ್ತಕ ಕುಸಿದು ಬೀಳುವ ದೃಶ್ಯ ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.