ಮಂಗಳೂರು: ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ 7 ಜನರ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದು, ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ ಮತ್ತು ಆತನ ಗ್ಯಾಂಗ್ ನ ಏಳು ಜನರನ್ನು ಬಂಧಿಸಿ, ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು ಜಿಲ್ಲಾಸ್ಪತ್ರೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್ ಡೌನ್ ಸಂಬಂಧ ಕರ್ನಾಟಕ- ಕೇರಳ ಗಡಿ ಬಂದ್ ಆಗಿದ್ದು ಈ ಕಾರಣದಿಂದ, ಈ ಎಂಟು ಜನರು ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿನ ಅಡ್ಡೂರಿಗೆ ಬಂದಿತ್ತು.










