ಹೈದರಾಬಾದ್ : ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರು ಇಂದು 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಹುಟ್ಟುಹಬ್ಬದ ಅಂಗವಾಗಿ ಅನುಷ್ಕಾ ಶೆಟ್ಟಿ ಅವರು ಅಭಿನಯದ “ನಿಶಬ್ದಂ” ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಹೇಮಂತ್ ಮಧುಕರ್ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರು ಮಾತು ಬಾರದ ಯುವತಿಯ ಪಾತ್ರದಲ್ಲಿ ನಟಿಸಿದ್ದು, ಅನುಷ್ಕಾ ಅವರಿಗೆ ಜೋಡಿಯಾಗಿ ನಟ ಮಾಧವನ್ ಅವರು ಕಾಣಿಸಿಕೊಂಡಿದ್ದಾರೆ.









