ನಟಿ ತ್ರಿಷಾ ಕುರಿತು ಅವಹೇಳನಕಾರಿ ಹೇಳಿಕೆ- ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್…

67
firstsuddi

ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ಇಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ನಟಿ ತ್ರಿಷಾ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆ ಕೇಳಿದ್ದಾರೆ.

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ತ್ರಿಷಾ ಅವರು ವಿಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮನ್ಸೂರ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ‘ತ್ರಿಷಾ ಜೊತೆ ನಟಿಸುತ್ತೇನೆ ಎಂದಾಗ ಬೆಡ್ರೂಂ ದೃಶ್ಯ ಇರಬಹುದು ಎಂದು ನಾನು ಭಾವಿಸಿದೆ. ಈ ಮೊದಲ ಸಿನಿಮಾಗಳಲ್ಲಿ ನಟಿಯರನ್ನು ಬೆಡ್ರೂಂಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು. ಈ ಸಿನಿಮಾದಲ್ಲೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ. ನಾನು ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅದು ನನಗೆ ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರನ್ನು ನೋಡಲೂ ಅವಕಾಶ ಕೊಡಲಿಲ್ಲ’ ಎಂದು ನಟ ಮನ್ಸೂರ್ ಅಲಿ ಖಾನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಈಗ ವಿಚಾರಣೆ ಬಳಿಕ ಮನ್ಸೂರ್ ಅವರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ‘ಸಹನಟಿ ತ್ರಿಷಾ ಅವರೇ ನನ್ನನ್ನು ಕ್ಷಮಿಸಿ’ ಎಂದು ಮನ್ಸೂರ್ ಹೇಳಿರುವುದಾಗಿ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.