ನದಿಯಲ್ಲಿ ಸಿಲುಕಿದ ಬೋಟ್ – 12 ಪ್ರವಾಸಿಗರು ಪ್ರಾಣಾಪಾಯದಿಂದ ಪಾರು…

58
firstsuddi

ಕಾರವಾರ : ರಿವರ್ ರ‍್ಯಾಫ್ಟಿಂಗ್ ವೇಳೆ ಬೋಟ್ ಇದ್ದಕ್ಕಿದ್ದಂತೆ ನದಿಗೆ ಸಿಲುಕಿ, ಮುಳುಗುವ ಹಂತ ತಲುಪಿದ್ದು, ಅದೃಷ್ಟವಶಾತ್ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದೆ.

ರಬ್ಬರ್ ಬೋಟ್ ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್ ಮಾಡುವಂತಿಲ್ಲ. ಆದರೆ, ಖಾಸಗಿ ಆಯೋಜಕರು ಅನುಮತಿಯಿಲ್ಲದೇ 12 ಜನ ಪ್ರವಾಸಿಗರನ್ನು ರಿವರ್ ರ‍್ಯಾಫ್ಟಿಂಗ್ ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ವೇಳೆ ಭಾರ ಹೆಚ್ಚಾಗಿ ಬೋಟ್ ಮುಳುಗುವ ಹಂತ ತಲುಪಿದೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬಂದಿದ್ದು, ಮಕ್ಕಳು ಸೇರಿದಂತೆ 12 ಮಂದಿ ಜೀವ ಉಳಿದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜೋಯಿಡಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.