ಹಿಂದೂಗಳ ಕುಂಭಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆ ಸಾರಿದ ಮುಸ್ಲಿಮರು.

82
firstsuddi

ಚಿಕ್ಕಮಗಳೂರು : ಪ್ರಸ್ತುತ ಸಮಾಜದಲ್ಲಿ ಧರ್ಮ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಮಸೀದಿ ಮುಂದೆ ಹಿಂದೂಗಳ ಕುಂಭಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆಯನ್ನು ಸಾರಿದ್ದಾರೆ.

ಕಳೆದೊಂದು ವಾರದಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆಯುತ್ತಿರುವ ಆದಿ ಶಂಕರಾಚಾರ್ಯ ಮಹಾ ಕುಂಬಾಭಿಷೇಕಕ್ಕೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ನಲ್ಲಿ ಹರಿಹರಪುರ ಮಠದ ಸ್ವಾಮೀಜಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಗಳ ಫೋಟೋ ಹಾಕಿ, ಆ ಫ್ಲೆಕ್ಸ್ ನನ್ನು ಮಸೀದಿ ಕಾಂಪೌಂಡ್ ಮೇಲೆ ಹಾಕಿ ಕುಂಭಾಭಿಷೇಕಕ್ಕೆ ಶುಭಹಾರೈಸಿದ್ದಾರೆ. ಮುಸ್ಲಿಮರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.