ನಾನು ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡಲು ಸಿದ್ಧ : ಎಸ್.ಟಿ.ಸೋಮಶೇಖರ್.

114
firstsuddi

ಮೈಸೂರು : ನಾನು ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡಲು ಸಿದ್ದನಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? ಎಂಬ ಸಾ.ರಾ.ಮಹೇಶ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಸ್.ಟಿ.ಸೋಮಶೇಖರ್ ಅವರು, ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಮುಂಜಾಗ್ರತೆ ಕ್ರಮಗಳ ಕುರಿತು ಸಭೆ ಮಾಡಿದ್ದೇನೆ. ಎಲ್ಲ ಶಾಸಕರು ಸಭೆಗೆ ಬಂದು ಸಲಹೆ ಕೊಟ್ಟಿದ್ದಾರೆ. ಆದರೆ ಕೆ.ಆರ್.ನಗರದ ಕ್ಷೇತ್ರದ ಶಾಸಕರು ಸಭೆಗೆ ಯಾಕೆ ಬರಲಿಲ್ಲ?. ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಸಭೆಗೆ ಬರಬೇಕಿತ್ತು .ಈಗ ಟೀಕೆ ಮಾಡುವ ಬದಲು ಆಗ ಕೇಳಬಹುದಿತ್ತಲ್ವೆ? ಈಗ ಜನರೇ ತೀರ್ಮಾನ ಮಾಡಲಿ ಯಾರು ಬದುಕಿದ್ದಾರೆ ಅಂತ. ನನಗೂ ದಿನಕ್ಕೂ ವೆಂಟಿಲೇಟರ್, ಬೆಡ್ ಗಾಗಿ ಹತ್ತಾರು ಕರೆಗಳು ಬರುತ್ತವೆ. ಶ್ರೀಮಂತನಾಗಲಿ ಅಥವಾ ಬಡವನಾಗಲಿ ಮೊದಲು ಬಂದವರಿಗೆ ಚಿಕಿತ್ಸೆ ಕೊಡಿ ಎಂದು ಸೂಚನೆ ನೀಡಿದ್ದೇನೆ. ಇದು ನನ್ನ ಕಾರ್ಯವೈಖರಿ ಎಂದರು.