ನಾಲ್ಕು ಚಕ್ರದ ವಾಹನ ಹೊಂದಿರುವವರಿಗೆ ನೋಟಿಸ್ ನೀಡಿರುವುದು ಖಂಡನೀಯ : ಇರ್ಫಾನ್.

72
firstsuddi

ಕೊಟ್ಟಿಗೆಹಾರ : ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ನೀಡಿದ್ದು ಇಂತಹ ಕಾರ್ಡ್‍ಗಳನ್ನು ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ನೆಪವೊಡ್ಡಿ ಅಂತಹವರಿಗೆ ದಂಡ ವಿಧಿಸಿ ನೋಟಿಸ್ ನೀಡುತ್ತಿರುವುದು ಖಂಡನೀಯ ಎಂದು ಬಣಕಲ್ ಗ್ರಾ.ಪಂ ಉಪಾಧ್ಯಕ್ಷರಾದ ಇರ್ಪಾನ್ ಹೇಳಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ಶ್ರೀಮಂತರಂತೆ ಬಡವರು ಕೂಡ ತಾವು ವಾಹನದಲ್ಲಿ ತಿರುಗಾಡಬೇಕು ಎಂಬ ಕನಸು ಕನಸಾಗಿಯೇ ಉಳಿಯಲಿದೆ. ಸಂಘ ಸಂಥೆ ಹಾಗೂ ಬ್ಯಾಂಕ್‍ಗಳಲ್ಲಿ ಮತ್ತು ಪೈನಾನ್ಸ್‍ಗಳಲ್ಲಿ ಸಾಲ ಮಾಡಿ 50 ಸಾವಿರ, 80 ಸಾವಿರ ರೂಗಳಿಗೆ ಕಾರು ಖರೀದಿ ಮಾಡಿರುತ್ತಾರೆ. ಅಂತಹವರಿಗೆ 80 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ನಿಯಮವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.