ನೀವು ಕಂಡ ಕನಸನ್ನು ಪೂರೈಸಲು ಯಾವಾಗಲೂ ಪ್ರಯತ್ನಿಸುತ್ತೇನೆ : ರಾಜೀವ್ ಗಾಂಧಿ ಜನ್ಮದಿನದಂದು ರಾಹುಲ್ ಟ್ವೀಟ್.

124
firstsuddi

ನವದೆಹಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಜನ್ಮದಿನ ಹಿನ್ನೆಲೆ ಅವರ ಮಕ್ಕಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ರಾಜೀವ್ ಗಾಂಧಿ ಅವರ ವೀರ ಭೂಮಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಪ್ಪಾ, ನೀವು ಯಾವಾಗಲೂ ನನ್ನ ಜೊತೆ, ನನ್ನ ಹೃದಯದಲ್ಲಿದ್ದೀರಿ. ನೀವು ಈ ದೇಶಕ್ಕೆ ಕಂಡ ಕನಸನ್ನು ಪೂರೈಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ರಾಜೀವ್ ಗಾಂಧಿ ಅವರನ್ನು ನೆನೆದಿದ್ದಾರೆ. ನಮ್ಮ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಅವರಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.