ರಾಯಚೂರು : ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಲವ್ ಸರ್ಕಾರ್ ಹಾಗೂ ಕರೀನಾ ಮೃತ ಪ್ರೇಮಿಗಳು. ಲವ್ ಸರ್ಕಾರ್ ಹಾಗೂ ಕರೀನಾ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳ ಹಿಂದೆ ಲವ್ ಸರ್ಕಾರ್ ಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ಲವ್ ಸರ್ಕಾರ್ ಬೇರೆ ಯುವತಿಯ ಜೊತೆ ಮದುವೆ ಆಗಿದ್ದಕ್ಕೆ ಕರೀನಾ ಮನನೊಂದಿದ್ದಳು.
ಇತ್ತ ಪ್ರೀತಿಸಿದ ಪ್ರೇಯಸಿಯೊಂದಿಗೆ ಮದುವೆಯಾಗಲು ಆಗಲಿಲ್ಲ ಎಂದು ಲವ್ ಸರ್ಕಾರ್ ಮಾನಸಿಕವಾಗಿ ಕುಗ್ಗಿದ್ದ. ಇಬ್ಬರು ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










