ಪಿಎಸ್‍ಐ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಬಂಧನ…

64
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‍ನನ್ನು ಸಿಐಡಿ ವಶಕ್ಕೆ ಪಡೆದಿದೆ. ಈ ಆರ್.ಡಿ.ಪಾಟೀಲ್ ನಿನ್ನೆ ಬಂಧನಕ್ಕೊಳಗಾದ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ನ ಸಹೋದರ. ಮಹಾಂತೇಶ್ ನನ್ನು ನಿನ್ನೆ ಸಿಐಡಿ ತಂಡ ಬಂಧಿಸಿತು. ಈ ವೇಳೆ ಮಹಾಂತೇಶ್ ಪಾಟೀಲ್ ಗೆ ಆರ್ ಡಿ ಪಾಟೀಲ್ ಕರೆ ಮಾಡಿದ್ದ.

ಮಹಾಂತೇಶ್ ಗೆ ಆರ್.ಡಿ.ಪಾಟೀಲ್ ಕರೆ ಮಾಡಿದ್ದ ಆಧಾರದ ಮೇಲೆ ಸಿಐಡಿ ಪೊಲೀಸರು ಲೋಕೇಷನ್ ಪತ್ತೆ ಹಚ್ಚಿದ್ದು, ಈತ ಮಹಾರಾಷ್ಟ್ರದ ಸೋಲಾಪುರ ಬಳಿ ಇರುವುದು ಗೊತ್ತಾಗಿದೆ. ಹೀಗಾಗಿ, ಈತನ ಬಂಧನಕ್ಕೆ ನಿನ್ನೆಯೇ ಸಿಐಡಿ ತಂಡ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿತ್ತು. ಅಂತೆಯೇ ಆರೋಪಿಯನ್ನು ಇಂದು ಬಂಧಿಸಿ ಕಲಬುರಗಿಗೆ ಕರೆ ತರಲಾಗಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಸಂಪೂರ್ಣ ರೂವಾರಿ ಈ ಆರ್ ಡಿ ಪಾಟೀಲ್. ಅಭ್ಯರ್ಥಿಗಳಿಗೆ ಈತ ಬ್ಲೂಟೂತ್ ಡಿವೈಸ್ ನೀಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ನಿನ್ನೆ ಬಂಧನಕ್ಕೆ ಒಳಗಾಗಿರುವ ಅಫಜಲಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿರುವ ಮಹಾಂತೇಶ ಪಾಟೀಲ್​ನನ್ನು ಇಂದು ಸಿಐಡಿ ತಂಡ ಕಲಬುರಗಿ ಜಿಲ್ಲಾ ಕೋರ್ಟ್​ ಎದುರು ಹಾಜರುಪಡಿಸಿದ್ದರು.