ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗ್ಬೇಡಿ.. ಭಾರತದಲ್ಲಿ ಸಿಗಲ್ಲ ಉದ್ಯೋಗ…

47
firstsuddi

ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದೆ.

ನಿನ್ನೆ ಹೊರಡಿಸಿದ ಜಂಟಿ ಅಧಿಸೂಚನೆಯಲ್ಲಿ, ಉನ್ನತ ಶಿಕ್ಷಣವನ್ನು ಪಡೆಯಲು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಸಂಬಂಧಪಟ್ಟ ಎಲ್ಲರಿಗೂ ಸೂಚಿಸಲಾಗಿದೆ. ಪಾಕಿಸ್ತಾನದ ಯಾವುದೇ ಪದವಿ ಕಾಲೇಜು/ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಉದ್ದೇಶಿಸಿರುವ ಯಾವುದೇ ಭಾರತೀಯ ಪ್ರಜೆ/ಭಾರತದ ಸಾಗರೋತ್ತರ ಪ್ರಜೆಯು ಪಾಕಿಸ್ತಾನದಲ್ಲಿ ಪಡೆದ ಅಂತಹ ಶೈಕ್ಷಣಿಕ ಅರ್ಹತೆಗಳ (ಯಾವುದೇ ವಿಷಯದಲ್ಲಿ) ಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗವನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಆದರೆ ಭಾರತೀಯ ಪೌರತ್ವವನ್ನು ಪಡೆದ ಪಾಕಿಸ್ತಾನಿ ವಲಸಿಗರಿಗೆ ವಿನಾಯಿತಿ ನೀಡುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ವಲಸಿಗರು ಮತ್ತು ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣ ಪದವಿಗಳನ್ನು ಪಡೆದಿರುವ ಮತ್ತು ಭಾರತದಿಂದ ಪೌರತ್ವವನ್ನು ಪಡೆದಿರುವ ಅವರ ಮಕ್ಕಳು ಎಂಎಚ್ಎಯಿಂದ ಭದ್ರತಾ ಅನುಮತಿಯನ್ನು ಪಡೆದ ನಂತರ ಭಾರತದಲ್ಲಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.