ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಜಿ.ಕೆ.ಗೋವಿಂದರಾವ್.

62
firstsuddi

ಹುಬ್ಬಳ್ಳಿ : ಚಿಂತಕ ಹಾಗೂ ಕಲಾವಿದ ಪ್ರೊ. ಜಿ.ಕೆ. ಗೋವಿಂದರಾವ್ ಅವರು ಇಂದು ಬೆಳಗಿನ ಜಾವ ನಗರದ ಗೋಲ್ಡನ್ ಟೌನ್ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾಗಿದ್ದು, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಗೋವಿಂದರಾವ್ ಅವರು ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಗೋವಿಂದರಾವ್ ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರಿಂದ ಮಾಹಿತಿ ತಿಳಿದುಬಂದಿದೆ.