ನೇಹಾ ಹಂತಕನಿಗೆ ಸಿದ್ದರಾಮಯ್ಯ ಸರ್ಕಾರ ಗಲ್ಲುಶಿಕ್ಷೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ: ರಂದೀಪ್ ಸುರ್ಜೆ ವಾಲಾ

14
firstsuddi

ಹುಬ್ಬಳ್ಳಿ: ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ, ಸಚಿವ ಹೆಚ್ ಕೆ ಪಾಟೀಲ್ ಅವರೊಂದಿಗೆ ಹುಬ್ಬಳ್ಳಿಯಲ್ಲಿರುವ ನೇಹಾ ಹಿರೇಮಠ ಮನೆಗೆ ಹೋಗಿ ಆಕೆಯ ತಂದೆತಾಯಿಗಳಿಗೆ ಸಾಂತ್ವನ ಹೇಳಿದರು.

ನಿರಂಜನ ಹಿರೇಮಠ ಮತ್ತು ಗೀತಾ ಹಿರೇಮಠ ಆವರೊಂದಿಗೆ ಹಿಂದಿಯಲ್ಲಿ ಮಾತಾಡಿದ ಸುರ್ಜೆವಾಲಾ, ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಕರ್ನಾಟಕ ಸರ್ಕಾರದ ಭರವಸೆಯನ್ನು ಪುನರುಚ್ಛರಿಸಿದರು. ನೀವು ಯಾವ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ, ನಾನು ನಿಮ್ಮ ಮಗಳ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತಾಡಿದ್ದೇನೆ, ಅವರು ಹೆಚ್ ಕೆ ಪಾಟೀಲ್ ಅವರಿಗೆ ಹೇಳಿದ ಮಾತುಗಳನ್ನೇ ನನಗೂ ಹೇಳಿದ್ದಾರೆ, ನೀವು ದೈರ್ಯವಾಗಿರಿ ಎಂದು ಹಿರೇಮಠ ದಂಪತಿಗೆ ಅವರು ಹೇಳಿದರು.

ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದು ನಿಮಗೆ ಗೊತ್ತಿದೆ, ಮತ್ತು ವಿಚಾರಣೆಗಾಗಿ ರಾಜ್ಯ ಸರ್ಕಾರ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ನಿರ್ಧಾರ ಸಹ ಮಾಡಿದೆ. ಪ್ರಕರಣವನ್ನು 120 ದಿನಗಳಲ್ಲಿ ಇತ್ಯರ್ಥಗೊಳಿಸುವೆಡೆ ಸರ್ಕಾರದ ಚಿಂತೆ ಇದೆ, ಸಿದ್ದರಾಮಯ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ, ಹಂತಕನಿಗೆ ಗಲ್ಲು ಶಿಕ್ಷೆಯನ್ನು ಶಿಫಾರಸ್ಸು ಮಾಡಲಿವೆ ಎಂದು ರಂದೀಪ್ ದಂಪತಿಗೆ ಹೇಳಿದರು.