ಬೆಂಗಳೂರು : ವಿಧಾನಸಭೆ ಕಲಾಪದಲ್ಲಿಂದು ಸಿದ್ದರಾಮಯ್ಯನವರ ಪಂಚೆ ಕಳಚಿದ್ದು, ಸಿದ್ದರಾಮಯ್ಯ ಅವರ ಪಂಚೆ ಪ್ರಸಂಗ ಕಲಾಪದಲ್ಲಿ ಇರುವವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೆಪ್ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದಾಗ ಸಿದ್ದರಾಮಯ್ಯಗೆ ಅರಿವಾಗದಂತೆ ಪಂಚೆ ಕಳಚಿದೆ. ಕೂಡಲೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಬಳಿ ಹೋಗಿ ಪಂಚೆ ಕಳಚಿರುವ ಬಗ್ಗೆ ಗುಟ್ಟಾಗಿ ಕಿವಿಯಲ್ಲಿ ಹೇಳುತ್ತಾರೆ. ಆಗ ಸಿದ್ದರಾಮಯ್ಯ ಅವರು ಪಂಚೆ ಬಿಚ್ಚಿ ಹೋಗಿದೆ. ನಾನು ಪಂಚೆ ಕಟ್ಟಿಕೊಂಡು ಬಂದು ಭಾಷಣವನ್ನು ಮಂದುವರಿಸುತ್ತೇನೆ. ಪಂಚೆ ಕಳಚಿಕೊಂಡಿದೆ ಈಶ್ವರಪ್ಪ ಏಕೋ ದಪ್ಪವಾಗಿದ್ದೇನೆ ಎಂದರು.
ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಅಧ್ಯಕ್ಷರು ಬಂದು ಪಕ್ಷದ ಮಾನ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದಾರೆ. ಆದರೆ ನೀವು ಊರಿಗೆಲ್ಲ ಹೇಳಿಬಿಟ್ಟ್ರಿ ಎಂದಿದ್ದಾರೆ.
ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ, ಈಗ ಕೊರೋನಾ ಬಂದ ಬಳಿಕ ಬೊಜ್ಜು ಜಾಸ್ತಿ ಬಂದಿದೆ, ಪಂಚೆ ಬಿಚ್ಚಿಕೊಳ್ಳುತ್ತದೆ, ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು ಎಂದು ಸಿದ್ದರಾಮಯ್ಯ ಸದನದಲ್ಲಿ ಹೇಳಿದರು.










