ಚಂಡೀಗಢ : ಬಾಲಿವುಡ್ ನಟ ಸೋನು ಸೂದ್ ಅವರು ನಿನ್ನೆ ಪಂಜಾಬ್ ನ ʻಸ್ಟೇಟ್ ಐಕಾನ್ʼ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲಾ ಒಳ್ಳೆಯ ವಿಷಯಗಳಂತೆ ಈ ಪ್ರಯಾಣವೂ ಕೊನೆಗೊಂಡಿದೆ. ನಾನು ಸ್ವಯಂಪ್ರೇರಣೆಯಿಂದ ಪಂಜಾಬ್ನ ಸ್ಟೇಟ್ ಐಕಾನ್ ಸ್ಥಾನದಿಂದ ಕೆಳಗಿಳಿದಿದ್ದೇನೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣೆಯ ಭಾಗವಾಗಿ ಚುನಾವಣಾ ಆಯೋಗ ಕಳೆದ ವರ್ಷ ಸೋನು ಸೂದ್ ಅವರನ್ನು ‘ಸ್ಟೇಟ್ ಐಕಾನ್’ ಆಗಿ ಆಯ್ಕೆ ಮಾಡಿತ್ತು. ಆದರೆ, ಅವರ ಸಹೋದರಿ ಮಾಳವಿಕಾ ಸೂದ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಟೇಟ್ ಐಕಾನ್ ಸ್ಥಾನದಿಂದ ಹೊರಬಂದಿದ್ದಾರೆ.










