ಬೆಂಗಳೂರು : ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಾಯತ್ರಿ ನಗರದಲ್ಲಿ ನಡೆದಿದೆ.
ಇಂದುಶ್ರೀ (28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಎರಡು ವರ್ಷದಿಂದ ರಾಕೇಶ್ ಎಂಬುವವರನ್ನು ಪ್ರೀತಿಸುತ್ತಿದ್ದ ಇಂದುಶ್ರೀ 9 ತಿಂಗಳ ಹಿಂದೆಯಷ್ಟೇ ರಾಕೇಶ್ ಜೊತೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಬಳಿಕ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಡೆತ್‍ನೋಟ್ ಬರೆದಿಟ್ಟು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.
ಅಲ್ಲದೇ ತನ್ನ ಗಂಡನಿಗೆ ಇತರ ಯುವತಿಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಪತಿ ವಿರುದ್ಧ ಇಂದುಶ್ರೀ ಆರೋಪ ಮಾಡಿದ್ದಾರೆ. ಇಂದುಶ್ರೀ ಅವರ ತಂದೆ ನೀಡಿದ ದೂರಿನನ್ವಯ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










