ಕಾನೂನುಬದ್ಧ ಇಂಧನ ವ್ಯವಹಾರವನ್ನು ರಾಜಕೀಯಗೊಳಿಸಬಾರದು : ಭಾರತ.

75
firstsuddi

ನವದೆಹಲಿ : ಭಾರತವು ನಡೆಸುತ್ತಿರುವ ಕಾನೂನುಬದ್ಧ ತೈಲ ಆಮದು-ರಫ್ತು ವಹಿವಾಟುಗಳನ್ನು ರಾಜಕೀಯಗೊಳಿಸಬಾರದು ಎಂದು ಭಾರತ ಹೇಳಿದೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಹಿನ್ನೆಲೆ ಅನೇಕ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಈ ವೇಳೆ ರಿಯಾಯಿತಿ ದರದಲ್ಲಿ ಭಾರತ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಹಲವಾರು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಮೂಲದಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ.

ರಷ್ಯಾ ಭಾರತಕ್ಕೆ ಕಚ್ಚಾ ತೈಲದ ಪೂರೈಕೆದಾರ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಲು ನಾವು ಮುಕ್ತವಾಗಿದ್ದೇವೆ ಎಂಬ ನಿಲುವನ್ನು ಭಾರತ ಹೊಂದಿದೆ. ಈ ನಿಲುವಿನ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಗೆ ಉತ್ತರ ನೀಡಿರುವ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ತಿರುಗೇಟು ನೀಡಿದೆ. ಭಾರತ ಕಚ್ಚಾತೈಲ ಆಮದಿನ ಮೇಲೆ 85% ರಷ್ಟು ಅವಲಂಬನೆಯಾಗಿದೆ. ಹೀಗಾಗಿ ನಾವು ವಹಿವಾಟು ನಡೆಸುತ್ತಿದ್ದೇವೆ ಎಂದು ಹೇಳಿದೆ.