ಪತ್ನಿಯ ಅಗಲಿಕೆಯಿಂದ ಮನನೊಂದು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ…

132
firstsuddi

ಬಳ್ಳಾರಿ : ಅನಾರೋಗ್ಯದಿಂದ ಮೃತಪಟ್ಟ ಪತ್ನಿಯ ಸಾವಿನಿಂದ ಮನನೊಂದು ಪತಿ ತನ್ನ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರವಲಯದ ಮುಂಡರಗಿಯ ಹೆಚ್‍ಎಲ್‍ಸಿ ಕಾಲುವೆಯಲ್ಲಿ ನಡೆದಿದೆ. ಗಣೇಶ್ ಆಚಾರಿ ಅವರು ತಮ್ಮ ಮಕ್ಕಳಾದ ಸ್ಪೂರ್ತಿ(12) ಹಾಗೂ ಕೀರ್ತನಾ(15) ಅವರೊಂದಿಗೆ ಸೇರಿ ಕಾಲುವೆಗೆ ಹಾರಿದ್ದಾರೆ. ಗಣೇಶ್ ಆಚಾರಿ ಅವರ ಪತ್ನಿ ಕಳೆದ 15 ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರಿಂದ ತೀವ್ರ ನೊಂದಿದ್ದ ಪತಿ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ಪಡೆಗಳು ಕೀರ್ತನಾಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಸ್ಪೂರ್ತಿಯ ಮೃತದೇಹವನ್ನು ಹೊರತೆಗೆಯಲಾಗಿದ್ದು, ಗಣೇಶ್ ಆಚಾರಿ ಅವರ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.