ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ-ಬೆಳಗಾವಿ ಮೂಲದ ಯೋಧ ಹುತಾತ್ಮ…

521
firstsuddi

ಬೆಳಗಾವಿ : ಜಮ್ಮು ಕಾಶ್ಮೀರದ ಕೃಷ್ಣಘಾಟಿ ಸೆಕ್ಟರ್‍ನಲ್ಲಿ ಪಾಕ್ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬೆಳಗಾವಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬೆಳಗಾವಿಯ ಉಚಗಾಂವ ಗ್ರಾಮದ ರಾಹುಲ್ ಭೈರು ಸುಳಗೇಕರ(25) ಹುತಾತ್ಮ ಯೋಧ ಎಂದು ಗುರುತಿಸಲಾಗಿದೆ. ಕೃಷ್ಣಘಾಟಿ ಸೆಕ್ಟರ್‍ನಲ್ಲಿ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ನಿನ್ನೆ ತಡರಾತ್ರಿ 2ಗಂಟೆಯಿಂದ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು, ಈ ವೇಳೆ ಪಾಕ್ ಸೈನಿಕರ ಗುಂಡಿನ ದಾಳಿಗೆ ಬೆಳಗಾವಿಯ ಯೋಧ ರಾಹುಲ್ ಅವರು ಹುತಾತ್ಮರಾಗಿದ್ದಾರೆ. ರಾಹುಲ್ ಅವರು ಜಮ್ಮುವಿನಲ್ಲಿ 4ನೇ ಮರಾಠ ಯೂನಿಟ್‍ನಲ್ಲಿ ಸೇವೆಸಲ್ಲಿಸುತ್ತಿದ್ದರು.