ಕಲ್ಲು ತುಂಬಿದ ಟ್ರಾಕ್ಟರ್ ಗೆ ಬೊಲೆರೊ ಡಿಕ್ಕಿ-5ಮಂದಿ ಸಾವು…

210
firstsuddi

ಬೆಳಗಾವಿ : ಕಲ್ಲು ತುಂಬಿದ ಟ್ರಾಕ್ಟರ್ ಗೆ ಬೊಲೆರೊ ಡಿಕ್ಕಿಯಾಗಿ 5 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಗ್ರಾಮದ ಬಳಿ ಮಡೆದಿದೆ. ಬೆಳಗಾವಿ ತಾಲ್ಲೂಕಿನ ಹಂಗರಗಾದ ಅದಾ ಪಾಟೀಲ್(44), ಕೃಷ್ಣಾ ಕಣಬರಕರ(46), ಮಹಾದೇವಪ್ಪ ಕಣಬರಕರ(48), ಅರುಣ ಮುತಗೇಕರ(37) ಹಾಗೂ ಬಾಳು ಅಂಬೇವಾಡಿಕರ(50) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಮೃತರು ಬೊಲೆರೋ ವಾಹನದಲ್ಲಿ ಮಂಡೋಳಿಯಿಂದ ಪಂಡರಾಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕಲ್ಲು ತುಂಬಿದ ಟ್ರ್ಯಾಕ್ಟರ್‍ಗೆ ಡಿಕ್ಕಿಯಾದ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 7ಮಂದಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.