ಪಾಗಲ್ ಪ್ರೇಮಿಯ ಕಾಟ, ಪೊಲೀಸರ ಹೆಸರಲ್ಲಿ ಕರೆ ಮಾಡಿ ಬೆದರಿಕೆ – ಪ್ರಾಣ ಕಳೆದುಕೊಂಡ ಯುವತಿ..!

76
firstsuddi

ಬೆಂಗಳೂರು : ಪಾಗಲ್ ಪ್ರೇಮಿಯ ಕಾಟಕ್ಕೆ ಹೆದರಿ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಗರದ ದೊಡ್ಡ ಬೀದರಕಲ್ಲುನಲ್ಲಿ ನಡೆದಿದೆ.

ಮೃತ ಯುವತಿಯನ್ನು ಸಾಕಮ್ಮ(ಸಾಕ್ಷಿ) ಎಂದು ಗುರುತಿಸಲಾಗಿದೆ. ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವಳಾದ ಸಾಕ್ಷಿ ನಗರದ ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು, ಯಶವಂತಪುರದ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಂ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಅರುಣ್ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲ ತನ್ನ ಸ್ನೇಹಿತ ಗೋಪಾಲ್ ಎಂಬಾತನ ಮೂಲಕ ಯುವತಿಯ ಮಾವ ಪ್ರಜ್ವಲ್ಗೆ ಫೋನ್ ಮಾಡಿಸಿದ್ದ. ಬಸವೇಶ್ವರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಿದ್ದೀನಿ. ಸಾಕ್ಷಿಯನ್ನು ಅರುಣ್ ಗೆ ಮದುವೆ ಮಾಡಿಕೊಡದಿದ್ದರೆ, ಅರುಣ್ ಸೂಸೈಡ್ ಮಾಡಿಕೊಳ್ಳುತ್ತಾನೆ. ಆಗ ನಿಮ್ಮ ಮೇಲೆ ಎಫ್ ಐಆರ್ ದಾಖಲಿಸುತ್ತೇವೆ ಅಂತ ಬೆದರಿಸಿದ್ದ. ಈ ಸುದ್ದಿ ಕೇಳಿ ಬೆದರಿದ ಸಾಕ್ಷಿ, ಅಕ್ಕನ ಮನೆಯಲ್ಲೇ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

ಈ ಕುರಿತು ಪೋಷಕರು ದೂರು ನೀಡಿದ್ದು, ಸದ್ಯ ಉತ್ತರ ವಿಭಾಗದ ಪೀಣ್ಯ ಪೊಲೀಸ್ ಸಿಬ್ಬಂದಿ ಅರುಣ್ ಮತ್ತು ಗೋಪಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.