ಪುನೀತ್ ನಿಧನದಿಂದ ಖಿನ್ನತೆ ; ಅಭಿಮಾನಿ ನೇಣಿಗೆ ಶರಣು…

66
firstsuddi

ಹಾಸನ : ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದಿಂದ ಖಿನ್ನತೆಯೊಳಗಾಗಿದ್ದ ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಯೂರ(34) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ. ನಗರದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಪುತ್ರನಾಗಿದ್ದಾರೆ.

ನಟ ಪುನೀತ್ ಅವರ ಅಭಿಮಾನಿಯಾಗಿದ್ದ ಮಯೂರ, ಅಪ್ಪು ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಅಪ್ಪು ಸಾವಿನ ಸಾವಿನ ಬಳಿಕ ಮಾನಸಿಕವಾಗಿ ನೊಂದಿದ್ದರು. ನಿನ್ನೆ ಸಂಜೆ ನಗರದ ರಾಜಕುಮಾರ ನಗರದ ಮನೆಯಲ್ಲಿ ಮಯೂರ ನೇಣಿಗೆ ಶರಣಾಗಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.