ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಟ, ಆಸ್ಕರ್ ಪ್ರಶಸ್ತಿ ವಿಜೇತ ಕೆವಿನ್ ಸ್ಪೇಸಿ(62) ವಿರುದ್ಧ ದೂರು ದಾಖಲಾಗಿದೆ.
ಲಂಡನ್ ನ ಮೆಟ್ರೊಪಾಲಿಟಿನ್ ಪೊಲೀಸರು ಇವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂವರು ಪುರುಷರಲ್ಲಿ ಇಬ್ಬರ ಮೇಲೆ ಕೇವಲ ಲೈಂಗಿಕ ದೌರ್ಜನ್ಯ ಎಸಗಿದ್ದರೆ, ಒಬ್ಬರ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಅಲ್ಲದೇ ಸಾಕ್ಷಿಗಳನ್ನು ಕಲೆ ಹಾಕಿರುವ ತನಿಖಾಧಿಕಾರಿಗಳು ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಈವರೆಗೂ ಕೆವಿನ್ ವಿರುದ್ಧ ನಾಲ್ಕು ಲೈಂಗಿಕ ಪ್ರಕರಣಗಳು ದಾಖಲಾಗಿದೆ. ಅಷ್ಟೇ ಅಲ್ಲದೇ, ಈ ನಟನ ವಿರುದ್ಧ ಮೀಟೂ ಆರೋಪ ಕೂಡ ಇದೆ. ಸದ್ಯ ಕೆವಿನ್ ನ್ಯೂಯಾರ್ಕ್ ನಲ್ಲಿದ್ದು, ಅವರು ಬ್ರಿಟನ್ ಗೆ ಬಂದ ನಂತರ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಹೌಸ್ ಆಫ್ ಕಾರ್ಡ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆವಿನ್ ನಟಿಸಿದ್ದಾರೆ. ಇವರು, ಅಮೆರಿಕನ್ ಬ್ಯೂಟಿ, ದಿ ಯೂಶ್ಯುಲ್ ಸಸ್ಪೆಕ್ಟ್ ಸಿನಿಮಾಗಳಿಗಾಗಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.










