ಶ್ರೀನಗರ : ಪ್ರತಿಕೂಲ ಹವಾಮಾನ ಹಾಗೂ ಮಳೆಯ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಯಾತ್ರಾರ್ಥಿಗಳಿಗೆ ಮುಂದಿನ ಆದೇಶದವರೆಗೆ ಮೂಲ ಶಿಬಿರಗಳಲ್ಲಿಯೇ ತಂಗುವಂತೆ ಸೂಚನೆ ನೀಡಲಾಗಿದೆ.
ಅಮರನಾಥ ಯಾತ್ರೆಗೆ ತೆರಳುವ ಪಹಲ್ಗಾಮ್ ಹಾಗೂ ಬಾಲ್ವಾಲ್ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಹವಾಮಾನ ಸುಧಾರಿಸಿದ ನಂತರವೇ ಯಾತ್ರೆಗೆ ಅನುಮತಿ ನೀಡಲಾಗುವುದು ಎಂದು ಶಿಬಿರದ ವ್ಯವಸ್ಥಾಪಕರು ಹೇಳಿದ್ದಾರೆ.
ಅಮರನಾಥ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 11ರಂದು ಕೊನೆಗೊಳ್ಳಲಿದೆ.










