ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸರ್ಕಾರ ಸರ್ವ ಸನ್ನದ್ಧ…

61
firstsuddi

ಬೆಳಗಾವಿ: ಪ್ರತಿ ಪಕ್ಷಗಳ ವಿರೋಧದ ನಡುವೆ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಬಿಜೆಪಿ ಸರ್ಕಾರ ಸರ್ವ ಸನ್ನದ್ಧವಾಗಿದೆ. ಈಗಾಗಲೇ ವಿಧೇಯಕದ ಕರಡು ಸಿದ್ಧವಾಗಿದ್ದು, ವಿಧೇಯಕದಲ್ಲಿ ಹಲವು ಕಠಿಣ ನಿಯಮಗಳನ್ನು ಸೇರಿಸಲಾಗಿದೆ. ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳುವ ಸಾಧ್ಯತೆ ಇದೆ.

ಮತಾಂತರ ನಿಷೇಧ ವಿಧೇಯಕದಲ್ಲಿನ ಅಂಶಗಳು ಹೀಗಿವೆ:

• ಬಲವಂತದ ಮತಾಂತರ ಶಿಕ್ಷಾರ್ಹ ಎಂಬ ಪ್ರಕಾರವೇ ವಿಧೇಯಕ ಸಿದ್ಧತಾ ಹಂತದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಜನ ಸಮುದಾಯವನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ.

• ಯಾವುದೇ ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು, ಮತಾಂತರ ಪ್ರಕ್ರಿಯೆ ನಡೆಸಬೇಕಾದರೂ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು.

• ಮತಾಂತರ ನಿಷೇಧ ಕಾಯ್ದೆ ಅಧಿನಿಯಮಗಳ ಪ್ರಕಾರ ಬಲವಂತದ ಮತಾಂತರ ಮಾಡುವ ಇಲ್ಲವೇ ಮತಾಂತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ. ಬಂಧಿತನಾಗುವ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನುರಹಿತ ಅಂತ ಪರಿಗಣಿಸುವುದು.

• ಮತಾಂತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನ ಕಾಪಾಡಲು ಮತ್ತು ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆ ಗೌಪ್ಯವಾಗಿಡುವಂತಿಲ್ಲ.

• ಮತಾಂತರ ಆಗುವ ಕುಟುಂಬದ ಯಾವುದೇ ವ್ಯಕ್ತಿಯ ತಕರಾರು ಇದ್ದರೆ ಡಿಸಿಗೆ ತಿಳಿಸಬೇಕು. ಡಿಸಿ ಅದರ ಸತ್ಯಾನುಸತ್ಯತೆ ತಿಳಿದು ಅನುಮತಿ ಕೊಡಬೇಕೋ ಬೇಡವೋ ಎಂದು ತೀರ್ಮಾನ ಮಾಡುತ್ತಾರೆ.

• ಮತಾಂತರ ಆಗುವ ಕುಟುಂಬದ ಯಾವುದೇ ವ್ಯಕ್ತಿಯ ತಕರಾರು ಇದ್ದರೆ ಡಿಸಿಗೆ ತಿಳಿಸಬೇಕು. ಡಿಸಿ ಅದರ ಸತ್ಯಾನುಸತ್ಯತೆ ತಿಳಿದು ಅನುಮತಿ ಕೊಡಬೇಕೋ ಬೇಡವೋ ಎಂದು ತೀರ್ಮಾನ ಮಾಡುತ್ತಾರೆ. ಎಸ್ ಸಿ ವ್ಯಕ್ತಿ ಮತಾಂತರ ಆದರೆ, ಆ ಕ್ಷಣದಿಂದ ಆ ವ್ಯಕ್ತಿಗೆ ಮೀಸಲಾತಿ ಆಧಾರದಲ್ಲಿ ಸಿಗುವ ಸರ್ಕಾರಿ ಸೇವೆಗಳು ಕಡಿತದ ಪ್ರಸ್ತಾವನೆ.

• ಮತಾಂತರಗೊಳ್ಳುವ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ. ಮತಾಂತರ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿದ್ದಲ್ಲಿ, ಅಂತಹ ನಿಗದಿತ ಪ್ರಕ್ರಿಯೆಯನ್ನು ನ್ಯೂಟ್ರಲ್ ಪ್ರದೇಶ, ತಟಸ್ಥ ಪ್ರದೇಶದಲ್ಲಿ ಮಾಡುವುದು ಕಡ್ಡಾಯ.