ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ಹೆಚ್.ಡಿ ದೇವೇಗೌಡ.

255
firstsuddi

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಪ್ರಧಾನಿ ನರೇಂದ್ರ ಮೋದಿಯವರಿಗೆ 4 ಪುಟಗಳ ಪತ್ರ ಬರೆದಿದ್ದು, ಕೊರೊನಾ ಸೋಂಕಿನ ತಡೆಗೆ ಸಲಹೆ ನೀಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅವಕಾಶ ನೀಡಬೇಕೆಂದು ಕೋರಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಜನರಿಗೆ ಗಡುವು ನೀಡಬೇಕು. ಬಡವರನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡುವಂತೆ ಸಲಹೆ ನೀಡಿರುವ ದೇವೇಗೌಡರು ಸರ್ಕಾರ ಒಂದು ವೇಳೆ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡುವುದಾದರೆ, ಅದೊಂದು ಅದ್ಬುತವಾದ ಮಾನವೀಯ ನಡೆಯಾಗಲಿದೆ ಎಂದಿದ್ದಾರೆ.