ಪ್ರಯಾಗ್‍ರಾಜ್‍ನ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಿಲ್ಲ: ಸಚಿವ ಅಶ್ವಿನಿ ವೈಷ್ಣವ್.

31

ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಭಾರಿ ಜನದಟ್ಟಣೆಯಿಂದಾಗಿ ನಗರದಲ್ಲಿ ಭಾರಿ ಸಂಚಾರ ದಟ್ಟಣೆಯುಂಟಾಗಿದೆ. ಅದೇ ಸಮಯದಲ್ಲಿ ಪ್ರಯಾಗ್‍ರಾಜ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿ ಹರುಡುತ್ತಿದ್ದಾರೆ, ಎಂದಿನಂತೆಯೇ ರೈಲು ನಿಲ್ದಾಣ ಕಾರ್ಯ ನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ನಿಲ್ದಾಣದಲ್ಲಿ ಅತಿಯಾದ ಒತ್ತಡ ಮತ್ತು ಅವ್ಯವಸ್ಥೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿರುವುದಾಗು ಕೆಲವರು ವರದಿ ಮಾಡಿದ್ದರು, ಈಗ ಪ್ರಯಾಣಿಕರು ತಮ್ಮ ರೈಲು ಹಿಡಿಯಲು ಪ್ರಯಾಗ್‍ರಾಜ್ ಜಂಕ್ಷನ್‍ಗೆ ಹೋಗಬೇಕಾಗುತ್ತದೆ. ಜನಸಂದಣಿಯನ್ನು ನಿಯಂತ್ರಿಸಿಸಲಾಗುತ್ತಿದ್ದು, ರೈಲ್ವೆ ನಿಲ್ದಾಣ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.