ಪ್ರವಾದಿ ಬಗ್ಗೆ ಅವಹೇಳನ – ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದ ಅಮಾನತು…

77
firstsuddi

ಹೈದರಾಬಾದ್(ತೆಲಂಗಾಣ): ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ ನಿಮ್ಮನ್ನು ಏಕೆ ಉಚ್ಚಾಟನೆ ಮಾಡಬಾರದು ಎಂಬುದಕ್ಕೆ ಸೂಕ್ತ ಕಾರಣ ನೀಡುವಂತೆ ಪಕ್ಷವು ಅವರಿಗೆ 10 ದಿನಗಳ ಕಾಲಾವಕಾಶ ನೀಡಿದೆ.

ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ರಾಜಾ ಸಿಂಗ್ ಪ್ರವಾದಿಯವರ ಬಗ್ಗೆ ಮಾತನಾಡುವ ವಿಡಿಯೋ ವೈರಲ್ ಆದ ಬಳಿಕ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಜೊತೆಗೆ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಐಪಿಸಿಯ 295 (ಎ), 153 (ಎ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಡಬೀರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಇಂದು ಬೆಳಗ್ಗೆ ಇವರನ್ನ ಪೊಲೀಸರು ಬಂಧನ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅಮಾನತು ಮಾಡಿ ಮಹತ್ವದ ಆದೇಶ ಹೊರಹಾಕಿದೆ.