ಪ್ರಿಯಕರನ ಮನೆಯಲ್ಲಿ ಯುವತಿ ನೇಣಿಗೆ ಶರಣು ; ಯುವಕನ ಮನೆಗೆ ಬೆಂಕಿ…

123
firstsuddi

ಬಾಗಲಕೋಟೆ : ಪ್ರಿಯಕರನ ಮನೆಯಲ್ಲಿ ಅನುಮಾನಾಸ್ಪದವಾಗಿ ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ.

ಬಸಮ್ಮ(20) ಆತ್ಮಹತ್ಯೆಗೆ ಶರಣಾದ ಯುವತಿ. ರಂಜಿತ್ ಹಾಗೂ ಬಸಮ್ಮ ಪ್ರೀತಿಸುತ್ತಿದ್ದರು. ಆದರೆ ಅಂತರ್ಜಾತಿಯಾಗಿದ್ದರಿಂದ ವಿವಾಹವಾಗಿರಲಿಲ್ಲ. ಬಳಿಕ ಬಸಮ್ಮಳನ್ನು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಶಾಂತಗಿರಿ ಗ್ರಾಮದ ಯುವಕನೊಬ್ಬನ ಜೊತೆ ವಿವಾಹ ಮಾಡಲಾಗಿತ್ತು. ಆದರೆ ಬಸಮ್ಮ ಗಂಡನನ್ನು ಬಿಟ್ಟು ಆಕೆಯ ಪ್ರಿಯಕರ ರಂಜಿತ್ ಮನೆಯಲ್ಲಿ 5 ತಿಂಗಳಿನಿಂದ ವಾಸಿಸುತ್ತಿದ್ದಳು. ಆದರೆ ಇದೀಗ ರಂಜಿತ್ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ಬೆನ್ನಲ್ಲೇ ಯುವಕನ ಕುಟುಂಬಸ್ಥರು ನಾಪತ್ತೆಯಾಗಿದ್ದು, ಯುವತಿ ಸಾವಿಗೆ ರಂಜಿತ್ ಮನಯವರೇ ಕಾರಣ ಎಂದು ಬಸಮ್ಮ ಪೋಷಕರು ಆರೋಪಿಸಿದ್ದಾರೆ.

ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಎರಡೂ ಕಡೆ ಪ್ರಕರಣ ದಾಖಲಿಸಿಕೊಂಡ ಅಮೀಗಢ ಪೊಲೀಸರು ಹತ್ತಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.