ಬೆಂಗಳೂರು : ಫೆಬ್ರವರಿ 7ರಿಂದ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬಜೆಟ್ ಸಿದ್ದತೆ ಕುರಿತು ಮಾಹಿತಿ ನೀಡಿರುವ ಸಿಎಂ, ಬಜೆಟ್ ಬಗ್ಗೆ ಗೊಂದಲ ಇಲ್ಲ. ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆಗಳನ್ನು ಮುಂದಿನ ವಾರದಿಂದ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಬಜೆಟ್ ಮಾಡುತ್ತೇವೆ. ಅಂತರ್ ರಾಜ್ಯ ಜಲವಿವಾದಗಳ ಬಗ್ಗೆ ವಕೀಲರ ಜೊತೆ ಚರ್ಚೆಸುತ್ತೇನೆ ಎಂದು ಹೇಳಿದರು.
ಸೋಮವಾರ ದೆಹಲಿಗೆ ಹೋಗುತ್ತೇನೆ. ನಾಳೆ ತೆರಳಲು ನಿರ್ಧರಿಸಿದ್ದೆ ಆದರೆ ನಮ್ಮ ಸಂಸದರ ಮನವಿ ಮೇರೆಗೆ ಸೋಮವಾರ ಹೋಗುತ್ತೇನೆ ಎಂದರು.










